ಕುಖ್ಯಾತ ರೌಡಿ ಸ್ಲಂ ಭರತನನ್ನು ಬೆಂಗಳೂರು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಆತನನ್ನು ಸೋಮವಾರವವಷ್ಟೇ ಉತ್ತರಪ್ರದೇಶದ ಮುರದಾಬಾದ್‌ನಿಂದ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ವಿಚಾರಣೆಗೆ ಕರೆದೊಯ್ಯುವ ವೇಳೆ ಸಿನಿಮೀಯ ರೀತಿಯಲ್ಲಿ ನಡೆದ ಘಟನೆಯಲ್ಲಿ ರೌಡಿ ಭರತ್ ಹತನಾಗಿದ್ದಾನೆ. ಗುರುವಾರ ನಸುಕಿನ ಜಾವ 5 ಗಂಟೆ ಸುಮಾರು ಪೀಣ್ಯ ಬಳಿ ಸ್ಲಂ ಭರತನನ್ನು ಕರೆದೊಯ್ಯುತ್ತಿದ್ದಾಗ ಆತನ ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ಮಾಡಿ ಭರತನನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಬೆನ್ನತ್ತಿದ್ದ ಪೊಲೀಸರು ಪೀಣ್ಯದ ಜಾನುವಾರು ಸಂವರ್ಧನ ಕೇಂದ್ರದಲ್ಲಿ ಎನ್‌ಕೌಂಟರ್ ಮಾಡಿ ಆತನ ಕಥೆ ಮುಗಿಸಿದ್ದಾರೆ.<br /><br />Encounter On Rowdy Slum Bharath By Bengaluru Police. Rowdy Slum Bharath Involving In Actor Yash sketch Conspiracy.